ಭಾರತದಲ್ಲಿ ಜೈನ‌ಧರ್ಮದ ಮುನಿ ಸಂಘದಲ್ಲಿ ಪರಮಪೂಜ್ಯ ಜ್ಞಾನಮತಿ ಮಾತೆ ಪ್ರಸಿದ್ಧ ಆರ್ಯಿಕಾ ಆಗಿದ್ದಾರೆ. ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ ಜಂಬುದ್ವೀಪ ದೇವಾಲಯ ಸಂಕೀರ್ಣ ಸೇರಿದಂತೆ ಹಲವಾರು ಜೈನ ದೇವಾಲಯಗಳ ನಿರ್ಮಾಣಕ್ಕೆ ಅವರು ಹೆಸರುವಾಸಿಯಾಗಿದ್ದಾರೆ. ಅವರು 22 ಅಕ್ಟೋಬರ್ 1934 ರಂದು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಟಿಕಾಯತ್ ನಗರದಲ್ಲಿ ಜನಿಸಿದರು. ಮೋಹಿನಿ ದೇವಿ ಮತ್ತು ಛೋಟೇಲಾಲ್ ದಂಪತಿಗಳ ಮಗಳಾದ ಆಕೆಗೆ ಮೈನಾ ಎಂದು ಹೆಸರಿಡಲಾಯಿತು. ಅವಳ ತಾಯಿಯ ವಿವಾಹದ ವೇಳೆ ಅಜ್ಜ-ಅಜ್ಜಿ ಉಡುಗೊರೆಯಾಗಿ ನೀಡಿದ ಪ್ರಾಚೀನ ಜೈನ ಗ್ರಂಥವಾದ ಪದ್ಮನಂದಿ ಪಂಚವಿಂಶತಿಕವನ್ನು ಕಂಡು ಅವರು ಪ್ರಭಾವಿತರಾಗಿದ್ದರು. ಅಕ್ಟೋಬರ್ 2, 1952 ರಂದು, ಶರದ್ ಪೂರ್ಣಿಮೆಯ ದಿನದಂದು, ಬರಾಬಂಕಿ ಜಿಲ್ಲೆಯಲ್ಲಿ ದೇಶಭೂಷಣ್ ಅವರಿಂದ ಬ್ರಹ್ಮಚಾರಿಣಿಯಾಗಿ ದೀಕ್ಷೆ ಪಡೆದರು. == ಟಿಪ್ಪಣಿಗಳು ==